ಭಾರತದ ಭೂಗಡಿ 16 ರಾಜ್ಯಗಳ, 92 ಜಿಲ್ಲೆ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂಚಿಕೆಯಾಗಿದೆ.
ರಾಡ್ ಕ್ಲಿಪ್ ರೇಖೆ [ ಭಾರತ ಮತ್ತು ಪಾಕಿಸ್ತಾನ]
ಡ್ಯೂರಾಂಡ್ ರೇಖೆ [ ಭಾರತ ಮತ್ತು ಆಫ್ಘಾನಿಸ್ತಾನ]
ಮ್ಯಾಕ್ ಮೋಹನ್ ರೇಖೆ [ ಭಾರತ ಮತ್ತು ಚೀನಾ ]
ಸಿಕ್ಕಿಂ ರಾಜ್ಯವು 1976ರಲ್ಲಿ ಭಾರತದ ರಾಜ್ಯವಾಗಿ ಪರಿಣಮಿಸಿತು
1971ರಲ್ಲಿ ಪೂರ್ವ ಪಾಕಿಸ್ತಾನವು ಪ್ರತ್ಯೇಕಗೊಂಡು ಬಾಂಗ್ಲಾದೇಶ ಉದಯವಾಯಿತು.
ಭಾರತದ ಭೂ ಗಡಿ ರೇಖೆಗಳಲ್ಲಿ ಬಾಂಗ್ಲಾದೇಶದ ಗಡಿ ರೇಖೆ ಅತಿ ಹೆಚ್ಚು ಉದ್ದವಾದದ್ದು.
ಕನ್ಯಾಕುಮಾರಿಯ ದಕ್ಷಿಣಕ್ಕಿರುವ ವಾಗ್ದೇ ಬ್ಯಾಂಕ್ ಭಾರತಕ್ಕೆ ಸೇರಿದೆ.
ಭಾರತವು ಪ್ರಸ್ತುತ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.
ರಾಜಸ್ಥಾನವು ದೇಶದ ಅತಿ ದೊಡ್ಡ ರಾಜ್ಯವಾಗಿದ್ದು ದೇಶದ ಒಟ್ಟು ವಿಸ್ತಾರವಾದ 10.4% ಒಳಗೊಂಡಿದೆ
ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಡಾಕ್ ಅತಿ ದೊಡ್ಡದು ಮತ್ತು ಲಕ್ಷದ್ವೀಪ ಅತಿ ಚಿಕ್ಕದು
ಭಾರತ ಸರ್ಕಾರವು ಆಗಸ್ಟ್ 5, 2019 ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೆಯ ವಿಧಿಯನ್ನು ರದ್ದುಗೊಳಿಸಿತು ಇದರೊಡನೆ 35A ವಿಧಿಯು ಸಹ ರದ್ದಾಗಿದ್ದು ಇದರಿಂದ ಯಾವುದೇ ಭಾರತೀಯ ನಾಗರಿಕ ಇಂದು ಜಮ್ಮು ಕಾಶ್ಮೀರ ಹಾಗೂ ಲಡಾಕ್ಗಳಲ್ಲಿ ಸ್ಥಿರಾಸ್ತಿಯನ್ನು ಹೊಂದಬಹುದಾಗಿದೆ.
ಮೇಘಾಲಯದ ಮೌಸಿನ್ ರಾಮ್ ಪ್ರಪಂಚದಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆದ ದಾಖಲೆಯನ್ನು ಹೊಂದಿದೆ
ಪ್ರಪಂಚದಲ್ಲಿ ಸರಾಸರಿ ಹೆಚ್ಚು ಮಳೆಯ ಸ್ಥಳ ಹವಾಯಿಯ ಮೌಂಟ್ ವಯಾಲೀಲೆ.
ಗಂಗಾ ನದಿಯನ್ನು 2008ರಲ್ಲಿ ರಾಷ್ಟ್ರೀಯ ನದಿ ಎಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಘೋಷಿಸಿದರು.
ದೇಶದಲ್ಲಿ ಸುಮಾರು 2018 ಮಾತನಾಡುವ ಭಾಷೆಗಳಿವೆ ಇವುಗಳಲ್ಲಿ 22 ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಎಂಟನೆಯ ಪರಿಚ್ಛೇದದಲ್ಲಿ ಪರಿಗಣಿಸಲಾಗಿದೆ.
ಪ್ರಪಂಚದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮ ಮೈಸೂರಿನಿಂದ ಪ್ರಕಟವಾಗುತ್ತಿರುವುದು. <—–
ಕರ್ನಾಟಕದ ಮತ್ತೂರು ಗ್ರಾಮದಲ್ಲಿ ಸಂಸ್ಕೃತವು ಮಾತನಾಡುವ ಬಾಷೆಯಾಗಿದೆ. <——–
ರಾಷ್ಟ್ರೀಯ ಪ್ರಾಣಿ ಹುಲಿ, ರಾಷ್ಟ್ರೀಯ ಹಣ್ಣು ಮಾವಿನ ಹಣ್ಣು, ರಾಷ್ಟ್ರೀಯ ಪುಷ್ಪ ಕಮಲ, ರಾಷ್ಟ್ರೀಯ ವೃಕ್ಷ ಆಲದ ಮರ, ರಾಷ್ಟ್ರೀಯ ನದಿ ಗಂಗಾ ನದಿ <——