ಭಾರತದ ಸ್ಥಾನ, ಗಾತ್ರ ಮತ್ತು ವಿಸ್ತೀರ್ಣ

  • ಭಾರತವು ವಿಸ್ತೀರ್ಣದಲ್ಲಿ ಪ್ರಪಂಚದ 7ನೇ ಅತಿ ದೊಡ್ಡ ರಾಷ್ಟ್ರ
  • ಭಾರತವು ಪ್ರಪಂಚದ ಶೇಕಡ 2.4 ರಷ್ಟು ಭೂ ಭಾಗವನ್ನು ಒಳಗೊಂಡಿದೆ.
  • ಭಾರತವು ಸುಮಾರು 15,200 ಕಿಲೋಮೀಟರ್ ಉದ್ದವಾದ ಭೂ ಮೇರಿಯನ್ನ ಹೊಂದಿದೆ.
  • 7 ದೇಶಗಳು ಭಾರತದೊಳಗೆ ಭೂಗಡಿಯನ್ನು ಹಂಚಿಕೊಂಡಿವೆ [ಚೈನಾ, ನೇಪಾಳ, ಭೂತಾನ್, ಮಯನ್ಮಾರ್, ಬಾಂಗ್ಲಾ, ಆಫ್ಘಾನಿಸ್ತಾನ, ಪಾಕಿಸ್ತಾನ]
  • 7 ದೇಶಗಳೊಡನೆ ಭಾರತವು ಜಲಗಡಿಯನ್ನು ಹಂಚಿಕೊಂಡಿದೆ [ ಪಾಕಿಸ್ತಾನ, ಮಾಲ್ಡೀವ್ಸ್, ಶ್ರೀಲಂಕಾ, ಥೈಲ್ಯಾಂಡ್, ಇಂಡೋನೇಷಿಯಾ, ಮಯನ್ಮಾರ್, ಬಾಂಗ್ಲಾದೇಶ]
  • ಭಾರತದ ಭೂಗಡಿ 16 ರಾಜ್ಯಗಳ, 92 ಜಿಲ್ಲೆ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂಚಿಕೆಯಾಗಿದೆ.
  • ರಾಡ್ ಕ್ಲಿಪ್ ರೇಖೆ [ ಭಾರತ ಮತ್ತು ಪಾಕಿಸ್ತಾನ]
  • ಡ್ಯೂರಾಂಡ್ ರೇಖೆ [ ಭಾರತ ಮತ್ತು ಆಫ್ಘಾನಿಸ್ತಾನ]
  • ಮ್ಯಾಕ್ ಮೋಹನ್ ರೇಖೆ [ ಭಾರತ ಮತ್ತು ಚೀನಾ ]
  • ಸಿಕ್ಕಿಂ ರಾಜ್ಯವು 1976ರಲ್ಲಿ ಭಾರತದ ರಾಜ್ಯವಾಗಿ ಪರಿಣಮಿಸಿತು
  • 1971ರಲ್ಲಿ ಪೂರ್ವ ಪಾಕಿಸ್ತಾನವು ಪ್ರತ್ಯೇಕಗೊಂಡು ಬಾಂಗ್ಲಾದೇಶ ಉದಯವಾಯಿತು.
  • ಭಾರತದ ಭೂ ಗಡಿ ರೇಖೆಗಳಲ್ಲಿ ಬಾಂಗ್ಲಾದೇಶದ ಗಡಿ ರೇಖೆ ಅತಿ ಹೆಚ್ಚು ಉದ್ದವಾದದ್ದು.
  • ಕನ್ಯಾಕುಮಾರಿಯ ದಕ್ಷಿಣಕ್ಕಿರುವ ವಾಗ್ದೇ ಬ್ಯಾಂಕ್ ಭಾರತಕ್ಕೆ ಸೇರಿದೆ.
  • ಭಾರತವು ಪ್ರಸ್ತುತ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.
  • ರಾಜಸ್ಥಾನವು ದೇಶದ ಅತಿ ದೊಡ್ಡ ರಾಜ್ಯವಾಗಿದ್ದು ದೇಶದ ಒಟ್ಟು ವಿಸ್ತಾರವಾದ 10.4% ಒಳಗೊಂಡಿದೆ
  • ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಡಾಕ್ ಅತಿ ದೊಡ್ಡದು ಮತ್ತು ಲಕ್ಷದ್ವೀಪ ಅತಿ ಚಿಕ್ಕದು
  • ಭಾರತ ಸರ್ಕಾರವು ಆಗಸ್ಟ್  5, 2019 ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೆಯ ವಿಧಿಯನ್ನು ರದ್ದುಗೊಳಿಸಿತು ಇದರೊಡನೆ 35A ವಿಧಿಯು ಸಹ ರದ್ದಾಗಿದ್ದು ಇದರಿಂದ ಯಾವುದೇ ಭಾರತೀಯ ನಾಗರಿಕ ಇಂದು ಜಮ್ಮು ಕಾಶ್ಮೀರ ಹಾಗೂ ಲಡಾಕ್ಗಳಲ್ಲಿ ಸ್ಥಿರಾಸ್ತಿಯನ್ನು ಹೊಂದಬಹುದಾಗಿದೆ.
  • ಮೇಘಾಲಯದ ಮೌಸಿನ್ ರಾಮ್ ಪ್ರಪಂಚದಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆದ ದಾಖಲೆಯನ್ನು ಹೊಂದಿದೆ
  • ಪ್ರಪಂಚದಲ್ಲಿ ಸರಾಸರಿ ಹೆಚ್ಚು ಮಳೆಯ ಸ್ಥಳ ಹವಾಯಿಯ ಮೌಂಟ್ ವಯಾಲೀಲೆ.
  • ಗಂಗಾ ನದಿಯನ್ನು 2008ರಲ್ಲಿ ರಾಷ್ಟ್ರೀಯ ನದಿ ಎಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಘೋಷಿಸಿದರು.
  • ದೇಶದಲ್ಲಿ ಸುಮಾರು 2018 ಮಾತನಾಡುವ ಭಾಷೆಗಳಿವೆ ಇವುಗಳಲ್ಲಿ 22 ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಎಂಟನೆಯ ಪರಿಚ್ಛೇದದಲ್ಲಿ ಪರಿಗಣಿಸಲಾಗಿದೆ.
  • ಪ್ರಪಂಚದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮ ಮೈಸೂರಿನಿಂದ ಪ್ರಕಟವಾಗುತ್ತಿರುವುದು. <—–
  • ಕರ್ನಾಟಕದ ಮತ್ತೂರು ಗ್ರಾಮದಲ್ಲಿ ಸಂಸ್ಕೃತವು ಮಾತನಾಡುವ ಬಾಷೆಯಾಗಿದೆ. <——–
  • ರಾಷ್ಟ್ರೀಯ ಪ್ರಾಣಿ ಹುಲಿ, ರಾಷ್ಟ್ರೀಯ ಹಣ್ಣು ಮಾವಿನ ಹಣ್ಣು, ರಾಷ್ಟ್ರೀಯ ಪುಷ್ಪ ಕಮಲ, ರಾಷ್ಟ್ರೀಯ ವೃಕ್ಷ ಆಲದ ಮರ, ರಾಷ್ಟ್ರೀಯ ನದಿ ಗಂಗಾ ನದಿ <——

 

Leave a Reply

Your email address will not be published. Required fields are marked *